ಈ ಲೇಖನದಲ್ಲಿ ದೇಶಗಳ ರಾಷ್ಟ್ರೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಸರಕುಗಳ ಒಟ್ಟು ಮೌಲ್ಯ ಮತ್ತು ಆ ರಾಷ್ಟ್ರದಲ್ಲಿ ಅದೇ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಸೇವಾ ವ್ಯವಹಾರಗಳ ಒಟ್ಟು ಮೌಲ್ಯಗಳೆರಡರ ಮೊತ್ತವು ಆ ರಾಷ್ಟ್ರದ ಒಟ್ಟಾರೆ ಆಂತರಿಕ ಉತ್ಪನ್ನ ಅಥವಾ ರಾಷ್ಟ್ರೀಯ ಉತ್ಪನ್ನವೆಂದು (ಜಿ.ಡಿ.ಪಿ.) ಕರೆಯಿಸಿಕೊಳ್ಳುವುದು. ಈ ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಜಿಡಿಪಿಯನ್ನು ಕೊಳ್ಳುವ ಶಕ್ತಿಯ ಸಮಾನತೆಯ ಆಧಾರದ ಮೇಲೆ ಗಣಿಸಲಾಗಿದೆ. ಇಲ್ಲಿ ಮೂರು ವಿಭಿನ್ನ ಮೂಲಗಳು ತಯಾರಿಸಿರುವ ಪಟ್ಟಿಗಳನ್ನು ನೀಡಲಾಗಿದೆ.(2007 ರ ತನಕ)